Friday, September 7, 2012



Freedom of Press V/s Rights of Accused
ಕಳೆದ ಕೆಲ ದಿನಗಳಿಂದ ಬಹುತೇಕ ಎಲ್ಲಾ ಮಾಧ್ಯಮಗಳಲ್ಲಿ, ಜನರ ಬಾಯಾಲ್ಲಿ, ಬೆಂಗಳೂರು/ಹುಬ್ಬಳ್ಳಿಯಲ್ಲಿ ಬಂದಿತರಾದ ಮುಸಲ್ಮಾನಯುವಕರದ್ದೇ ವಿಷಯ. ಆನೇಕ ಪತ್ರಿಕೆಗಳು ತನ್ನದೇ ಆದ ವಿಭಿನ್ನ / ವಿಶಿಷ್ಠ ರೀತಿಯಲ್ಲಿ ಹೆಡಿಂಗ್ ಗಳನ್ನು ನೀಡಿ ವರ್ಣ ರಂಜಿತ ವಾಗಿ ಬಿತ್ತರಿಸುತ್ತಿವೆ. Electronic ಮಾಧ್ಯಮದವರು ಮಾಡಿರುವ/ ಮಾಡುತ್ತಿರುವ, ವರದಿಗಳ ಬಗ್ಗೆ ಯಾವರೀತಿ ಹೇಳಿದರೂ ಸಾಲದು.  ಅಲ್ಲಿ ನೀರೂಪಣೆ ಮಾಡುವವನ ದ್ವನಿಯಲ್ಲಿಯೇ ಎಲ್ಲಾ ಹಿಂಸೆಗಳಿಗಿಂತ ಬಯಂಕರವಾಗಿರುತ್ತದೆ. ಹಾಗಾಗಿ ‘Braking news’ – ‘Flash News’ ನ ಅಲೆಯಲ್ಲಿ ತೇಲುತ್ತಿರುವ ಈ Electronic ಮಾಧ್ಯಮದವರ ಬಗ್ಗೆ ಏನೇಮಾತನಾಡಿದರು ಅರ್ಥವಿಲ್ಲ. ಇಂದು ಈ Electronic ಮಾಧ್ಯಮಗಳು ಸಹ, ಈ ದೇಶದ ಕಾನೂನು/ಸಂವಿಧಾನವನ್ನೂ ಮೀರಿ ಬೆಳೆದು ನಿಂತಿವೆ, ಅವುಗಳಿಗೆ ತಾವು ಮಾಡುತ್ತಿರುವ ತಪ್ಪಿನ ಅರಿವಾಗುವ ಪ್ರಶ್ನೇಯೇ ಇಲ್ಲದಂತಾಗಿದೆ.
ಇತ್ತಿಚೆಗೆ ಬಂದಿತರಾದ ಮುಸಲ್ಮಾನ ಯುವಕರು ಹಾಗು ಅವರ ಬಗ್ಗೆ ದಿನೇದಿನೇ ಬಿತ್ತರವಾಗುತ್ತಿರುವ ಸುದ್ದಿಗಳನ್ನು ನೋಡಿದಾಗ ಸಾಮಾಜಿಕವಾಗಿ/ಬೌತಿಕವಾಗಿ ತಮ್ಮನ್ನು ಬಿನ್ನರಿತಿಯಲ್ಲಿ ಗುರುತಿಸಿಕೊಂಡಿದ್ದ ಪತ್ತ್ರಿಕೆಗಳೂ ಸಹ ಈ ಎಲ್ಲಾ ಮಾಧ್ಯಮಗಳನ್ನು ಮೀರಿಸಿನಿಂತಿವೆ. ರಂಜನೀಯ ಸುದ್ದಿಯನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಪತ್ರಿಕಾ Ethics ಗಳನ್ನೂ ಮಿರಿದ್ದೇ ಅಲ್ಲದೆ ಈ ದೇಶದ ಕಾನೂನು ಗಳನ್ನು ಸಹ ಗಾಳಿಗೆ ತೂರಿ ಬಿಟ್ಟಿವೆ. ಈ ದೇಶದಲ್ಲಿ ಸಂವಿಧಾನ, ಕಾನೂನುಗಳು, ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಇವೆಲ್ಲಕ್ಕೂ ಮುಖ್ಯವಾಗಿ ಈ ದೆಶದಲ್ಲಿ ಪ್ರಜೆಗಳಿದ್ದಾರೆ ಅವರುಗಳಿಗೆ ಮೂಲಭೂತ ಹಕ್ಕುಗಳಿವೆ ಎಂಬುದನ್ನೂ ಮರೆತಂತಿದೆ.
ಆಗಸ್ಟ್ ತಿಂಗಳ 31ಬಹುತೇಕ ಪತ್ರಿಕೆ ಗಳ ಹೆಡ್ಡಿಗ್ “ಹನ್ನೊಂದು ಉಗ್ರರ ಬಂಧನ”, ರಾಜಕಾರಣಿಗಳು, ಪತ್ರಕರ್ತರ ಹತ್ಯೆಗೆ ಸಂಚುಇತ್ಯಾದಿ, ಸಾಮಾನ್ಯ ಇದು ಮುಖ್ಯ ಪುಟದ ಸುದ್ದಿ. ಕೆಲವೆ ಕೆಲವು ಪತ್ರಿಕೆಗಳು ”ಶಂಕಿತ ಉಗ್ರರ ಬಂಧನ ಎಂದು ಬಿಂಬಿಸಿದ್ದರು, ಉಗ್ರರು ಎಂಬುದನ್ನು ವಿಶೇಷ ಅರ್ಥದಲ್ಲಿ ನಮೂದಿಸಿರುವುದನ್ನು ಸಾಮಾನ್ಯ ಎಲ್ಲಾ ಪತ್ರಿಕೆಗಳಲ್ಲಿಯೂ ಕಾಣಬಹುದು, ಬಹುತೇಕರು ತಮ್ಮ ಎಲ್ಲೆ ಮೀರಿ ಸುದ್ದಿಯನ್ನು ಚಿತ್ರಿಸಿದ್ದರು.
ಭಾರತದ ಸಂವಿಧಾನದಲ್ಲಿ ಯಾವುದೇ ವ್ಯಕ್ತಿಯನ್ನು ಅಪರಾಧಿಯಂದು ಕರೆಯಬೇಕಾದರೆ ನ್ಯಾಯಾಲಯದಲ್ಲಿ ವಿಚಾರಣೆಯಾಗಬೇಕಾಗಿದೆ, ಯಾವುದೇವಿಚಾರಣೆ ಇಲ್ಲದೆ ಯಾವುದೇ ವ್ಯಕ್ತಿಯನ್ನು ಯರೂ ಸಹ ಅಪರಾಧಿ ಏಂದು ಸಂಭೋದಿಸುವುದು ಕಾನೂನು ಬಾಹಿರ. ಹಾಗಿರುವಾಗ ಬಂದಿಸಿದ ದಿನದಲ್ಲೇ “ಉಗ್ರರು” ಎಂದು ಪಟ್ಟ ಕಟ್ಟಿದ ಈ ಪತ್ರಿಕೆಗಳಿಗೆ ಈ ಅಧಿಕಾರ ನೀಡಿದವರು ಯಾರು?
ಈ ಪತ್ರಿಕೆಗಳನ್ನು ಓದುತಿದ್ದಾಗ ನನಗೆ ಒಮ್ಮೆ ನೆನಪಾದುದ್ದು 2008 ರಲ್ಲಿ ದಾವಣಗೆರೆಯಲ್ಲಿ ಬೈಕ್ ಕಳ್ಳತನದಲ್ಲಿ ಬಂದಿಸಿದ್ದ್  ಮುಸಲ್ಮಾನ್ ಯುವಕರನ್ನು ಹುಬ್ಬಳ್ಳಿ ನ್ಯಾಯಾಲಯದಲ್ಲಿ ನೆಡೆದ ಬಾಂಬ್ ದಾಳಿಯ ಆರೋಪಿತರು ಎಂದು ಬಿಂಬಿಸಿ ನಂತರ ಅದರ ಸುತ್ತ ಕತೆಹೆಣೆದ ಪತ್ರಿಕೆಗಳ ಅಂದಿನ ಸುದ್ದಿಗಳು ನನಗೆ ಹಿಂದಿ ಸಿನೆಮ “The Hero”ನೆನಪಾಗಿಸಿತ್ತು ಆಂದು ಸಹ ಪತ್ರಿಕೆಗಳು ಇದೇ ರಿತಿಯ ವರ್ಣರಂಜಿತ ಸುದ್ದಿಯನ್ನು ಬಿತ್ತರಿಸಿದ್ದವು, ಧಾರವಾಡದ ಸುತ್ತಮುತ್ತ ಬಚ್ಚಿಟ್ಟುರುವ RDX ಗಾಗಿ ಫೋಲಿಸರು ನೆಡೆಸುತ್ತಿದ್ದ ಶೋದವನ್ನು ಏಳೆ ಏಳೆಯಾಗಿ ಪ್ರತಿದಿನ ಬಿತ್ತರಿಸುತ್ತಿದ್ದವು. ಕೆಲ ತಿಂಗಳುಗಳ ನಂತರ ಶ್ರೀರಾಮ ಸೇನಯ ಕೆಲಕಾರ್ಯ ಕರ್ತರು ಈ ಕೇಸಿನಲ್ಲಿ ಬಂದಿತರಾಗಿ ಈ ಮುಸೀಲ್ಮ್ ಯುವಕರಿಗೂ ಹುಬ್ಬಳ್ಳಿ ನ್ಯಾಯಾಲಯದಲ್ಲಿ ಸಂಬವಿಸಿದ್ದ ಬಾಂಬ್ ಬ್ಲಾಸ್ಟ್ ಗೂ ಸಂಬದ್ದವಿಲ್ಲ ಎಂದಾದಗ,  ಯಾವ ಪತ್ರಿಕೆಯವರು ತಾವು ಮಾಡಿದ ತಪ್ಪಿನ ಬಗ್ಗೆ ಕ್ಷಮೆ ಕೇಳಿದನ್ನು ನಾನು ಎಲ್ಲಿಯೂ ನೋಡಲಿಲ್ಲ.

ಈ ಎಲ್ಲಾ ಘಟನೆಗಳು ಈ ಹಿಂದೆ ಬ್ರಿಟನ್ ನಲ್ಲಿ ಐರಿಷ್ ರಿಪಬ್ಲಿಕ್ ಅರ್ಮಿಯು ನೆಡೇಸಿದ ಬಾಂಬ್ ದಾಳಿ, ಹಾಗು ಬ್ರಿಟಿನ್ ಸರಕಾರ ಅಮಾಯಕ ಐರಿಷ್ ಪ್ರಜೆಗಳನ್ನು ಬಂದಿಸಿ ಜೈಲಿಗೆ ತಳ್ಳಿದ್ದು ಅದಕ್ಕೆ ಮಾಧ್ಯಮ ವರ್ಗ ಕಟ್ಟಿದ ಕತೆಗಳು ನೆನಪಾಗುತ್ತವೆ. ಈ ಘಟನೆಯಲ್ಲಿ ಬಂದಿತರಾದ ಈ ಅಮಾಯಕ ಐರಿಷ್ ಪ್ರಜೆಗಳಿಗೆ ಬ್ರಿಟನ್ ನ್ಯಾಯಲಯ ಶಿಕ್ಷೆಯನ್ನು ವಿದಿಸಿದ್ದೂ ಉಂಟು ಅವುಗಳಲ್ಲಿ ಕೆಲವುಗಳನ್ನು ಇಲ್ಲಿ ಪ್ರಸ್ಥಾಪಿಸುವುದು ಉಚಿತವೆನಿಸುತ್ತದೆ.
ಮುಖ್ಯವಾಗಿ 1974 ರ ಆಕ್ಟೋಬರ್ 5 ರಂದು, ಸಾಮಾನ್ಯವಾಗಿ ಬ್ರಿಟೀಷ್ ಸೈನಿಕರು ಇರುತ್ತಿದ್ದ ಗಿಲ್ಡ್ ಪೋರ್ಡ್ ಪಬ್ ನ ಮೇಲೆ ನೆಡೆದ ಬಾಂಬ್ ದಾಳಿ. ಈ ಘಟನೆಯಲ್ಲಿ ಒಬ್ಬರು ಸಿವಿಲಿಯನ್ ಸೆರಿದಂತೆ 4ಜನ ಸೈನಿಕರು ಮೃತರಾಗಿದ್ದರು, 60ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಇದೇ ವರ್ಷದ ನವಂಬರ್ ನಲ್ಲಿ ವೂಲ್ ವಿಚ್ ನಗರದ ಸಾರ್ವಜನಿಕ ಮನೆಮೇಲೆ ನಡದ ಮತೋಂದು ಬಾಂಬ್ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಕೆಲದಿನಗಳಲ್ಲಿ ಲಂಡನ್ ಪೋಲಿಸರು ಒಬ್ಬ ಮಹಿಳೆಯನ್ನೂ ಸೇರಿದಂತೆ ನಾಲ್ಕೂ ಜನ ಐರಿಷ್ ವ್ಯಕ್ತಿಗಳನ್ನು ಬಂದಿಸಿದ್ದರು.  ಇದು ಇಂದಿಗೂ ಸಹ “ಗಿಲ್ಡ್ ಪೋರ್ಡ್ ಪೋರ್” ಎಂದೇ ಪ್ರಖ್ಯಾತವಾಗಿರುವ ಈ ಕೇಸಿನಲ್ಲಿ ಎಲ್ಲಾ ನಾಲ್ಕೂ ಜನಕ್ಕೂ ಬ್ರಿಟನ್ ನ್ಯಾಯಾಲಯ, ಬಾಂಬ್ ದಾಳಿ, ಹತ್ಯೆ, ಮತ್ತಿತರ ಅಪಾದನೆಗಳಿಗೆ ಇವರನ್ನು ಅಪರಾದಿಗಳೆಂದು ಗೋಶಿಸಿ ಶಿಕ್ಷೆಯನ್ನು ನೀಡಿತ್ತು.
ಬಾಲ್ಕೆಂಬೆ ಸ್ಟ್ರೀಟ್ ಪ್ರಕರಣದಲ್ಲಿ ಬಾಗಿಯಾಗಿದ್ದ ಐರಿಷ ಅರ್ಮಿಯ ಕರ್ಯಕರ್ತರು, ಗಿಲ್ಡ್ ಪೋರ್ಡ್ ಪಬ್ ನ ಮೇಲೆ ಬಾಂಬ್ ದಾಳಿಯಲ್ಲಿ ಅಮಾಯಕರಿಗೆ ಶಿಕ್ಷೆಯಾಗಿರುವುದನ್ನು ತಮ್ಮ ವಕೀಲರ ಗಮನಕ್ಕೆ ತಂದರು, ಹಾಗು ತಾವೇ ಗಿಲ್ಡ್ ಪೋರ್ಡ್ ಪಬ್ ದಾಳಿಯನ್ನು ಮಾಡಿದ್ದಾಗಿ ಒಪ್ಪಿಕೋಂಡಿದ್ದರೂ ಸಹ, ಗಿಲ್ಡ್ ಪೋರ್ಡ್ ಘಟನೆಯಲ್ಲಿ ಶಿಕ್ಷೆಗೋಳಗಾಗಿದ್ದವರು ತಮ್ಮ ಮೇಲೆ ವಿದಿಸಿರುವ ಶಿಕ್ಷೇಯನ್ನು ರದ್ದು ಮಾಡಲು ಸಲ್ಲಿಸಿದ್ದ ಅಪೀಲನ್ನು ನ್ಯಾಯಾಲಯ ಮನ್ನಿಸದೆ ವಜಾಮಾಡಿತ್ತು, ಶಿಕ್ಷೆಯನ್ನು ಕಾಯಂಗೋಳಿಸಿತ್ತು.
1989ರಲ್ಲಿ ಡಿಟೆಕ್ಟೀವ್ ಒಬ್ಬ ನೆಡೆಸಿದ ಕಾರ್ಯಾಚರಣೆಯಲ್ಲಿ ಪೋಲಿಸ್ ವಿಚಾರಣಾಕಾರರು ವಿಚಾರಣೆಯ ಸಮಯದಲ್ಲಿ ತಿದ್ದಿದ, ಬದಲಿಸಿದ, ಹೇಳಿಕೆಗಳು ಹಾಗು ಬಚ್ಚಿಟ್ಟಿದ್ದ ದಾಖಲೆಗಳನ್ನು ಬಹಿರಂಗ ಪಡಿಸಿದ ನಂತರ ಈ ಹೋಸ ಸಾಕ್ಷ್ಯವನ್ನು ಮನ್ನಿಸಿದ ನ್ಯಾಯಾಲಯ ಈ ನಾಲ್ಕೂ ಜನರನ್ನು 1989 ರ ಅಕ್ಟೋಬರ್ ನಲ್ಲಿ ದೋಶಮುಕ್ತರನ್ನಾಗಿ ಬಿಡುಗಡೆ ಮಾಡಿತ್ತು.
ಇದು ಕೆವಲ ಗಿಲ್ಡ್ ಪೋರ್ಡ್ ಪೋರ್”ಗೆ ಸಂಬದಿಸಿದ್ದಷ್ಠೇ ಅಲ್ಲ, ಇದೆ ಸಮಯದಲ್ಲಿ ನೆಡೆದ “ಮ್ಯಗ್ವಾರ್ ಸೆವೆನ್” ಕೇಸಿಗೆ ಸಂಬದಿಸಿದಂತೆ ಡಿಸೆಂಬರ್ 1974 ರಲ್ಲಿ ಬಂದಿತರಾದ ಎಲ್ಲಾ ಏಳು ಜನರಿಗೂ ಇದೇ ಗತಿ. 12 ವರ್ಷ ಶಿಕ್ಷೆಗೊಳಗಾದ ಪ್ಯಾಟ್ರಿಕ್ ತಮ್ಮ ಜೈಲು ವಾಸ ಮುಗಿಸುವ ಮುಂಚೆಯೋ ಜೈಲಿನಲ್ಲೆ ಕೊನೆಯುಸಿರೆಳೆದರೆ, ಕೆಲವರು ತಮ್ಮ ಸೆರೆವಾಸವನ್ನು ಮುಗಿಸಿ ಬಿಡುಗಡೆಯಾಗಿದ್ದರು. ತದನಂತರ ಇವರೆಲ್ಲರೂ ಅಮಾಯಕರು ಎಂದು ತಿಳಿದ ಮೇಲೆ ಅವರಿಗೆ ನೀಡಿದ್ದ ಶಿಕ್ಷೆಯನ್ನು ವಜಾಗೋಳಿಸಿ ಉಳಿದವರನ್ನು 1990ರಲ್ಲಿ ಬಿಡುಗಡೆ ಮಾಡಲಾಯಿತು.
ಇದೇ ಪರಿಸ್ಥಿತಿ ಬಿರ್ಮಿಂಗ್ ಹ್ಯಾಮ್ ಸಿಕ್ಸ್  ನಲ್ಲಿ ಬಂದಿತರಾಗಿದ್ದ ಐರಿಷ್ ವ್ಯಕ್ತಿಗಳೂ ಸಹ ಅನುಭವಿಸಬೇಕಾಯಿತು, ಅಮಾಯಕರಾಗಿದ್ದರೂ ಟೆರರಿಸ್ಟ್ ಗಳಾಗಿ 1975 ರಲ್ಲಿ ಜೀವಾವದಿ ಶಿಕ್ಷೆಗೊಳಗಾಗಿ ನಂತರ ಅಮಾಯಕರಾಗಿ ಬಿಡುಗಡೆಯಾಗಿದ್ದು ನಿರಪರಾದಿಗಳನ್ನು ಅಪರಾದಿಗಳಾಗಿ ಬಿತ್ತರಿಸಿದ ಪೋಲಿಸರ ಮೇಲೆ ಕೇಸುದಾಕಲಾಗಿರುವುದು ಇತಿಹಾಸ.
ಈ ರೀತಿಯ ಘಟನೆಗಳು ಕೇವಲ ಲಂಡನ್ ನಲ್ಲಿ ಮಾತ್ರವಲ್ಲ ನಮ್ಮಲ್ಲೂ ಸಹ ಅನೇಕ ಘಟನೆಗಳಲ್ಲಿ ಅಮಾಯಕರನ್ನು ಅಪರಾಧಿಗಳಾಗಿ ತೊರಿಸಿರುವುದು ಹೊಸತೇನಲ್ಲ.
ದಿನಾಂಕ 07.02.2005ರಲ್ಲಿ ದೆಹಲಿ ಪೋಲಿಸರು ಹರಸಾಹಸ ಮಾಡಿ ಇಬ್ಬರು ಕಾಶ್ಮೀರಿ ವ್ಯಕ್ತಿಗಳನ್ನು ಟೆರರಿಸ್ಟ್ ಗಳೆಂದು ಬಂದಿಸಿ ಅವರಿಂದ ಕಾರು, ಮದ್ದು, ಗುಂಡು ಗಳನ್ನು ವಶಪಡಿಸಿದ್ದು, ನಂತರ ಇನ್ನೂ ನಾಲ್ಕು ಕಾಶ್ಮೀರಿ ವ್ಯಕ್ತಿಗಳನ್ನು ಟೆರರಿಸ್ಟ್ ಗಳೆಂದು ಬಂದಿಸಿದ್ದು ಹಾಗೆಯೇ ಅವರಿಗೆ ಸಹಾಯ ಮಾಡುತ್ತಿದ್ದ ಎಂಬ ಕಾರಣಕ್ಕೆ ಬಿಹಾರದ ವ್ಯಕ್ತಿಯನ್ನು ಬಂದಿಸಿದ್ದು ದೇಶದಲ್ಲೇ ದೊಡ್ಡ ಸುದ್ದಿ. ಇವರು ಪಾಕಿಸ್ಥಾನದ ISI ಜೋತೆಗೆ ಸಂಬಂದ್ದ ಹೊಂದಿರುವುದು, ಅಷ್ಟೇ ಅಲ್ಲದೆ ದೆಹಲಿಯಲ್ಲಿ ವಿದ್ವಂಸ ಕೃತ್ಯವೆಸಗುವ ಬಗ್ಗೆ ಬಾರಿಗುಮಾನಿ ವ್ಯಕ್ತಪಡಿಸಿದ ಪೋಲಿಸರು ಅವರನ್ನು ಬಂದಿಸಿ ಟೆರರಿಸ್ಟಗಳೆಂದು ಬಂದಿಸಿ ಮಾಧ್ಯಮದ ಮುಂದೆ ಬಿಂಬಿದಿದ್ದು ಸಹ  ಇತಿಹಾಸವಾಗಿದೆ. ಈ ಎಲ್ಲವನ್ನು ಸತ್ಯವೆಂದೇ ಬಿಂಬಿಸಿದ ಮಾಧ್ಯಮಗಳು ಹೆಮ್ಮೆ ಯಿಂದ ವರ್ಣ ರಂಜಿತ ಸುದ್ದಿಯನ್ನು ಬಿತ್ತರಿಸಿದ್ದವು. ಆದುದ್ದರಿಂದ ಇದು ನಮ್ಮಲ್ಲಿ ಅನೇಕರಿಗೆ ನೆನಪು ಇರುವ ಸಂಗತಿ. ನಂತರ ಏನಾಯಿತು? ಇದಕ್ಕೆ ಮಾತ್ರ ನಮ್ಮಲ್ಲಿ ಉತ್ತರವಿಲ್ಲ. ಈ ಕೇಸನ್ನು ಪ್ರಸ್ತಾಪಿಸಲು ಮುಖ್ಯಕಾರಣ ದಿನಾಂಕ 02.02.2011 ರಂದು ದೆಹಲಿಯ ಅಪರ ಜಿಲ್ಲಾನ್ಯಾಯಲಯ -ದ್ವಾರಕ, ಇಲ್ಲಿ ನ್ಯಾಯಾದೀಶರಾದ ಶ್ರೀ ವೀರೆಂದ್ರ ಭಟ್ ಇವರು ಈ ಕೇಸಿನ ಅಂತಿಮ ತೀರ್ಪನ್ನು ನೀಡಿದ್ದಾರೆ. ನ್ಯಾಯಾದೀಶರು ಈ ಕೇಸಿನ ಆಪಾದಿತರನ್ನೂ ಗೌರವದಿಂದ್ದ ಅವರ ಮೇಲೆ ಹೊರಿಸಿದ್ದ ಆಪಾದನೆಗಳಿಂದ ಬಿಡುಗಡೆ ಮಾಡಿದ್ದಲ್ಲದೆ, ಕೆನಾಡ ದೇಶದ ಮಹಿಳಾ ನ್ಯಾಯಾದೀಶೆ 26 ರು ವರ್ಷದ ನಂತರ ಬಿಡುಗಡೆ ಮಾಡುವ ಸಂಧರ್ಬದಲ್ಲಿ ಆತನಿಗಾಗಿ ಓದಿದ ಪಧ್ಯವನ್ನು ನೆನಪಿಸುತ್ತರೆ, ಅದು:-
Dear friends,
May the road rise to meet you,
May the wind be always at your back,
May the Sun shine warn on your face,
May the rain fall softly upon you,
May God hold you in the palm of his hand, now and forever
ಅಷ್ಟೇ ಅಲ್ಲ ಈ ರೀತಿಯ ಸುಳ್ಳು ಕತೆ ಯನ್ನು ಹೆಣೆದು ಅಮಾಯಕರ ಮೇಲೆ ಮೊಕದೊಮ್ಮೆ ಹಾಕಿ ಜೈಲಿನಲ್ಲಿ ಕೋಳೆಯುವಂತೆ ಮಾಡಿದ ಪೋಲಿಸರ ಮೇಲೆ  ಕಲಂ 167 IPC ರಡಿಯಲ್ಲಿ ಕೇಸು ದಾಖಲಿಸುವಂತೆ ಆದೇಶ ಮಾಡಿದ್ದಾರೆ. ಆದರೆ ಈ ಸಂಗತಿ ನಮಗೆ ಯಾವ ಪತ್ರಿಕೆಯ ಹೆಡಿಗ್ ನಲ್ಲಿಯೂ ಬರದೆ ಇದ್ದುದು ವಿಪರ್ಯಾಸ. ಟೆರರಿಸ್ಟ್ ಗಳೆಂದೆ ಬಿಂಬಿಸಿದ ಮಾಧ್ಯಮದವರು ಅವರಿಗೆ ಕ್ಷಮೇಕೇಳುವ ಗೋಜಿಗೆ ಹೋಗದಿರುವುದು, ಮತ್ತೂ ಅದೇರೀತಿಯಲ್ಲಿ ಪ್ರತಿಭಾರಿಯೂ ಯಾರಾದರನ್ನು ಬಂದಿಸಿದಾಗ ಅವರನ್ನು ಕೇವಲ ಅಪಾದಿತರೆಂದು ತಿಳಿಸದೆ, ಉಗ್ರ ಅಪರಾಧಿಗಳೆಂದು ಬಿತ್ತರಿಸುತ್ತಿರುವ ಮಾಧ್ಯಮ ಒಮ್ಮೆ ಮಾಡಿದ ತಪ್ಪನ್ನು ಮತ್ತೆ ಮತ್ತೇ ಮಾಡುತ್ತಿರುವುದು ದುರದೃಷ್ಠಕರ.
ಇದು ಕೇವಲ ಪತ್ರಿಕಾ ಸ್ವಾಂತತ್ರ್ಯದ ದುರುಪಯೋಗವಷ್ಟೇ ಅಲ್ಲ, ಇದು ಜನರ ಮೂಲ ಭೂತ ಹಕ್ಕುಗಳ ಕಸಿತವು ಹೌದು. ಕಾನೂನಿನಲ್ಲಿ ಬಂದಿಸಿದ ಯಾವುದೇವ್ಯಕ್ತಿ ಯನ್ನು ಕಾನೂನು ಅಮಾಯಕನೆಂದು/ ನಿರಪರಾಧಿಯೆಂದು ನೋಡುವುದು ವಾಡಿಕೆ “RIGHT TO FAIR TRAIL” ಏಂಬುದು ನಮ್ಮ ದೇಶದ ಸಂವಿಧಾನಿಕ ಹಕ್ಕು. It is a golden rule of the criminal jurisprudence of the country that an accused is presumed to be innocent unless he either admits his guilt or is proved to be the guilty by the prosecution. ಇತ್ತೀಚಿಗೆ ಬಂದಿಸಿರುವವರನ್ನು,  ಉಗ್ರರು ಎಂದು ಈಗಾಗಲೆ ಬಿಂಬಿಸಿರುವ/ ಬಿಂಬಿಸುತ್ತಿರುವ ಮಾಧ್ಯಮಗಳು ಎಷ್ಟು ಸರಿ.  
ಕೊನೆಯದಾಗಿ ಅಬ್ರಹಾಂ ಲಿಂಕನ್ ರವರ ಕೆಲಸಾಲುಗಳನ್ನು ನೆನಪಿಸ ಬಯಸುತ್ತೇನೆ ಅದು: “If you once forfeit the confidence of our fellow citizens, you can never regain their respect and esteem. It is true that you can fool all the people some of the time and some of the people all the time, but you cannot fool all the people all the time.